ಬೆಂಗಳೂರು : ಪ್ರಿಯತಮೆ ಜೊತೆಗೆ ಪ್ರವಾಸದಲ್ಲಿದ್ದ ಯುವಕನೊಬ್ಬನ ಮುಂಗೈಯನ್ನು ದುಷ್ಕರ್ಮಿಗಳು ಕತ್ತರಿಸಿದ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ರವೀಶ್ (23 ವರ್ಷ) ಮುಂಗೈ ಕಳೆದುಕೊಂಡ ಯುವಕ. ಈತ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬೆಟ್ಟದ ಮೇಲೆ ತನ್ನ ಪ್ರಿಯತಮೆ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ಆತನ ಮುಂಗೈಯನ್ನು ಕತ್ತರಿಸಿಕೊಂಡು ಹೋಗಿದ್ದಾರೆ. ಈ ಪ್ರೇಮಿಗಳು ಆನೇಕಲ್ನ ಯಾರಂಡಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಯಾವ ಕಾರಣಕ್ಕಾಗಿ ಆರೋಪಿಗಳು ಕೃತ್ಯ ಎಸಗಿದ್ದಾರೆ