ಏಳು ವರ್ಷ ಪ್ರೀತಿಸಿದ ಯುವತಿಗೆ ಕೈಕೊಟ್ಟು ಬೇರೆ ಮದುವೆ ಮಾಡಿಕೊಂಡ ಯುವಕ

ಹುಬ್ಬಳ್ಳಿ| Hanumanthu.P| Last Modified ಶನಿವಾರ, 2 ಡಿಸೆಂಬರ್ 2017 (11:40 IST)
ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಏಳು ವರ್ಷಗಳಿಂದ ದೈಹಿಕವಾಗಿ
ಬಳಕೆ ಮಾಡಿಕೊಂಡ ಪ್ರಿಯತಮೆಯನ್ನು ಬಿಟ್ಟು ಬೇರೆ ಯುವತಿಯೊಂದಿಗೆ ಮಾಡಿಕೊಂಡಿದ್ದು, ಮದುವೆಯ ಮಾಹಿತಿ ತಿಳಿದ ಪ್ರಯತಮೆ ಮದುವೆ ಮಂಟಪಕ್ಕೆ ಬಂದು ನ್ಯಾಯ ಕೊಡಿಸಲು ಅಂಗಲಾಚಿದ ಘಟನೆ ನಡೆದಿದೆ.

ಸುನೀಲ ಬಡಿಗೇರ ಎಂಬ ಯುವಕ ಕಳೆದ ಏಳು ವರ್ಷಗಳಿಂದ ತುಮಕೂರು ಮೂಲದ ಲಕ್ಷ್ಮೀಯನ್ನು ಪ್ರೀತಿ ಮಾಡುತ್ತಿದ್ದ. ಅಷ್ಟು ಮಾತ್ರವಲ್ಲದೇ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾನೆ.

ಸುನೀಲನ ಅಕ್ಕ ಕೆಲಸ ಮಾಡುವ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಯೊಂದಿಗೆ ಸುನೀಲ ಪರಿಚಯ ಬೆಳೆಸಿಕೊಂಡಿದ್ದು, ಈ
ಪರಿಚಯವೇ ಪ್ರೇಮಕ್ಕೆ ದಾರಿ ಮಾಡಿಕೊಟ್ಟಿದ್ದು
ಇಬ್ಬರು
ಪರಸ್ಪರವಾಗಿ ಪ್ರೀತಿಸುತ್ತಿದ್ದರು. ಆದರೆ, ದೈಹಿಕ ಸಂಪರ್ಕ ಬೆಳೆಸಿದ ಯುವಕ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ.

ಮದುವೆ ಮಂಟಪಕ್ಕೆ ಬಂದು ನ್ಯಾಯಕ್ಕಾಗಿ ಗಲಾಟೆ ನಡೆಸಿದ ಯುವತಿಯ ಮೇಲೆ ಸುನೀಲನ ಪೋಷಕರು ಹಲ್ಲೆ ನಡೆಸಿದ್ದಾರೆ.
ಗಾಯಗೊಂಡಿರುವ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ನಡುವೆ ಸುನೀಲನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸುನೀಲ ಮಾತ್ರ ಲಕ್ಷ್ಮೀಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :