ಮದುವೆ ಬಿಟ್ಟು ಬೇರೆ ಹುಡುಗರೊಂದಿಗೆ ಪರಾರಿಯಾದ ಯುವತಿಯರು ; ತಂದೆ, ತಾಯಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ, ಸೋಮವಾರ, 6 ಮೇ 2019 (13:02 IST)

ತನ್ನಿಬ್ಬರ ಪ್ರೀತಿಯ ಹೆಣ್ಣುಮಕ್ಕಳು ಬೇರೆ ಜಾತಿಯ ಯುವಕರೊಂದಿಗೆ ಓಡಿ ಹೋಗಿದ್ದರಿಂದ ಮನನೊಂದು ತಂದೆ-ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಬ್ಬರು ಮಕ್ಕಳು ಬೇರೆ ಯುವಕರೊಂದಿಗೆ ಪರಾರಿಯಾಗಿದ್ದಾರೆ. ಒಬ್ಬಳು ಮರಾಠಿ ಹುಡುಗನ ಜೊತೆ ಓಡಿ ಹೋದಳು.
ಕಿರಿಯ ಮಗಳು ಒಕ್ಕಲಿಗ ಹುಡುಗನೊಂದಿಗೆ ಓಡಿ ಹೋಗಿದ್ದಾಳೆ. ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ ಮರಕ್ಕೆ ನೇಣು ಬಿಗಿದು ಮಸಣ ಸೇರಿದ್ದಾರೆ.  

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಬೇವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ತಮ್ಮ ಕಣ್ಣು ತುಂಬಿಕೊಳ್ಳುವ ತವಕದಲ್ಲಿದ್ದ ತಂದೆ ತಾಯಿಗಳಿಗೆ 
ಮಕ್ಕಳು  ಅಂತರ್ಜಾತಿಯ ವಿವಾಹ ಮಾಡಿಕೊಂಡು ನಿರಾಸೆ ಮೂಡಿಸಿದ್ದಾರೆ.

ಮಕ್ಕಳು ಮನಸ್ಸಿಗೆ ಮಾಡಿದ ಆಘಾತದಿಂದಾಗಿ ಚೌಡಪ್ಪ(47), ಸುವರ್ಣಮ್ಮ(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಶ್ರೀ ಹಾಗೂ ಮಧುಶ್ರೀ ಓಡಿಹೋದವರು.

ಅನುಶ್ರೀ ಕಳೆದ ಎರಡು ವರ್ಷದ ಹಿಂದೆ ಮರಾಠಿ ಹುಡುಗನನ್ನು ಮದುವೆ ಆಗಿದ್ದಳು. ಇನ್ನು ಮಧುಶ್ರೀಗೆ ಮದುವೆ ಫಿಕ್ಸ್ ಆಗಿದ್ದು ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದರೆ ಮಧುಶ್ರೀ, ರೆಡ್ಡಿ ಜನಾಂಗದ ಹುಡುಗನ ಜೊತೆ ಓಡಿ ಹೋಗಿ ಮದುವೆಯಾಗಿದ್ದಾಳೆ. ಇದರಿಂದ ತಂದೆ-ತಾಯಿಗೆ ಬರಸಿಡಿಲು ಬಡಿದಂತಾಗಿದೆ. ಮರಕ್ಕೆ ನೇಣು ಬಿಗಿದುಕೊಂಡು ತಮ್ಮ ಪ್ರಾಣ ಬಿಟ್ಟಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ - ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ

ಪಶ್ಚಿಮ ಬಂಗಾಳ : ಇಂದು ಲೋಕಸಭಾ ಚುನಾವಣೆಯ 5 ನೇ ಹಂತದ ಮತದಾನ ನಡೆಯುತ್ತಿದ್ದು, ಈ ವೇಳೆ ಪಶ್ಚಿಮ ...

news

ಶ್ರೀಮಂತನೆಂದು ನಂಬಿಸಿ ಮಹಿಳೆಯರ ಹಣ ದೋಚಿ ಜೈಲು ಸೇರಿದ

ಇಂಗ್ಲೆಂಡ್ : ತಾನು ಶ್ರೀಮಂತನೆಂದು ನಂಬಿಸಿ ವ್ಯಕ್ತಿಯೊಬ್ಬ 6 ಮಹಿಳೆಯರ ಜೊತೆ ಸಂಬಂಧ ಬೆಳೆಸಿ ಹಣ ದೋಚಿ ...

news

ವಿಚಾರಣೆ ಹೆಸರಿನಲ್ಲಿ ಮಹಿಳೆಯರ ಮೇಲೆ ಪೊಲೀಸರು ನಡೆಸಿದ್ದಾರೆ ಇಂತಹ ಘೋರ ಕೃತ್ಯ

ನೈಜೀರಿಯಾ : ವಿಚಾರಣೆ ಹೆಸರಿನಲ್ಲಿ ಮಹಿಳೆಯರ ಮೇಲೆ ಪೊಲೀಸರು ಲೈಂಗಿಕ ಕಿರುಕುಳ ನೀಡಿದ ಘಟನೆ ...

news

ಕಾಮತೃಷೆಯನ್ನು ತೀರಿಸಿಕೊಳ್ಳಲು ಹೆತ್ತ ತಾಯಿಯನ್ನೇ ಬಳಸಿಕೊಂಡ ಪಾಪಿ ಮಗ!

ಪಂಜಾಬ್ : ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಮಗನೊಬ್ಬ ಹೆತ್ತ ತಾಯಿಯನ್ನೇ ಬಳಸಿಕೊಂಡ ಆಘಾತಕಾರಿ ಘಟನೆ ...