ವಿಧಾನಸೌಧದಲ್ಲಿ ‘ಸಂವಿಧಾನ ಪೀಠಿಕೆಯ ಓದು’ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಒಂದೂವರೆ ಕೋಟಿ ಜನ ಪಾಲ್ಗೊಂಡು ಪ್ರಜಾಪ್ರಭುತ್ವ ದಿನವನ್ನ ಆಚರಿಸುತ್ತಿದ್ದೇವೆ. ಈ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನ ಯಶಸ್ವಿ ಮಾಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾನು ಕೆಪಿಸಿಸಿ ಅಧ್ಯಕ್ಷ ಆಗಿ ಈ ಜವಾಬ್ದಾರಿ ತೆಗೆದುಕೊಂಡಾಗ ಸಂವಿಧಾನ ಪೀಠಿಕೆ ಪ್ರಾರಂಭ ಮಾಡುವ ಕೆಲಸ ಮಾಡಿದೆ. ಆದರೆ ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಮಕ್ಕಳ ಪಾತ್ರದ ಬಗ್ಗೆ ಯೋಚನೆ ಮಾಡಬೇಕಿದೆ.