ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗೆ ಹೋದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಪೊಲೀಸ್ ಠಾಣೆಯ ಇಬ್ಬರು ಪೊಲೀಸರು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆಸಲು ಹಸ್ಮಕಲ್ ಗ್ರಾಮಕ್ಕೆ ತೆರಳಿದ್ದರು. ಮಸ್ಕಿ ತಾಲೂಕಿನ ಹಸ್ಮಕಲ್ ಗ್ರಾಮದ ಮೋಡೆಕಾರ ದುರುಗಪ್ಪ ಎಂಬ ಆರೋಪಿಯನ್ನು ವಿಚಾರಣ ನಡೆಸಲು ಮುಂದಾದಾಗ ಮೋಡೇಕಾರ ದುರುಗಪ್ಪ ಮತ್ತಿತ್ತರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿ,. ಹಲ್ಲೆ ನಡೆಸಿದ್ದಾರೆ.