ಧಾರವಾಡ : ಸಿ.ಟಿ.ರವಿ ಅವರ ನಂತರ ಮತ್ತೊಬ್ಬ ಬಿಜೆಪಿ ನಾಯಕರಾದ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಮಂಜುನಾಥ್ ಆರ್.ಡಿ.ಹೆಸರಿನಿಂದ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಹಾಗೆ ವಿ.ಕೆ.ಬಾಸ್ ಬಗ್ಗೆ ತುಂಬಾ ಹಗೆತನ ಸಾಧಿಸುತ್ತಿದ್ದೀರಿ. ಯೋಗೇಶ್ ಗೌಡ ಕೊಲೆ ಕೇಸ್ ಸಿಬಿಐ ತನಿಖೆಗೆ ಒಪ್ಪಿಸಬೇಕು ಅನ್ನೋದು ಸರಿಯಲ್ಲ. ನಮ್ಮ ಬಾಸ್ ಬಗ್ಗೆ ನಾಲಿಗೆ ಹರಿಬಿಟ್ಟರೆ ಕಥೆ ಮುಗಿಸುತ್ತೇವೆ ಎಂದು ಪತ್ರದಲ್ಲಿ ಬರೆದು ಬೆದರಿಕೆ