ಮುಸಲ್ಮಾನರು ಮಾತ್ರವಲ್ಲ, ಹಿಂದುಗಳಲ್ಲಿಯೂ ಗೋಮಾಂಸ ಸೇವಿಸುವವರು ಇದ್ದಾರೆ ಎನ್ನುವ ಪೇಜಾವರ ಶ್ರೀಗಳ ಹೇಳಿಕೆಗೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳಲ್ಲಿಯೂ ಗೋಮಾಂಸ ಸೇವಿಸುವವರು ಇದ್ದಾರೆ ಎನ್ನುವ ಪೇಜಾವರ ಶ್ರೀಗಳ ಹೇಳಿಕೆ ಹಿದುಗಳಿಗೆ ಅಪಮಾನ ಮಾಡುವಂತಹದಾಗಿದೆ ಎಂದು ಗುಡುಗಿದ್ದಾರೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಒಡೆದು ರಾಮಮಂದಿರ ನಿರ್ಮಿಸುವ ಹೋರಾಟದಲ್ಲಿ ಪಾಲ್ಗೊಂಡಿದ್ದ ಶ್ರೀಗಳು ಇದೀಗ ಮುಸಲ್ಮಾನರ ಪರವಾಗಿರುವುದು ಮನಸ್ಸಿಗೆ ತುಂಬಾ ನೋವು