ದಸರಾ ಹಬ್ಬ ಕರ್ನಾಟಕದ ಜನತೆಯ ಮನಸ್ಸಿಗೆ ಧಾರ್ಮಿಕವಾಗಿಯೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಬಹಳ ಹತ್ತಿರವಾದ ಹಬ್ಬ. ಮೈಸೂರು ದಸರಾ, ಆನೆ ಅಂಬಾರಿ ಹತ್ತಿ ಲೋಕವನ್ನು ಹರಿಸುವ ಚಾಮುಂಡೇಶ್ವರಿ ದೇವಿ, ಅರಮನೆಯ ಸಡಗರಗಳಷ್ಟೇ ಅಲ್ಲದೆ, ಮನೆ ಮನೆಗಳಲ್ಲಿ ಕೂರಿಸುವ ಗೊಂಬೆಗಳು ಕೂಡ ದಸರಾ ಹಬ್ಬದ ವಿಶೇಷ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗಳಲ್ಲಿ ಗೊಂಬೆ ಹಬ್ಬ ಜನಪ್ರಿಯ. ದಸರಾದಲ್ಲಿ ಗೊಂಬೆ ಕೂರಿಸುವ ಪದ್ಧತಿ 18ನೇ ಶತಮಾನದಿಂದ ಮನೆಮನೆಯಲ್ಲೂ ಜಾರಿಗೆ ಬಂದಿದೆ. ಗೊಂಬೆ ಕೂರಿಸುವ ಪದ್ಧತಿ