ರಾಜ್ಯದೆಲ್ಲೆಡೆ ಚುನಾವಣೆ ಕಾವು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ರೆ, ವಾಣಿಜ್ಯ ನಗರಿಯಲ್ಲಿನ ಜನರು ಕೂಲ್ ಆಗಿ ರಂಗಪಂಚಮಿ ಬಣ್ಣದೋಕುಳಿಯಲ್ಲಿ ಮುಳುಗಿ ಸಂಭ್ರಮಪಟ್ಟರು.ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ರಂಗಪಂಚಮಿ ಬಣ್ಣದೋಕುಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಗರದ ವಿವಿಧ ಬಡಾವಣೆಗಳಲ್ಲಿ ಓಕುಳಿ ಆಟವಾಡಿ ಜನರು ಸಂಭ್ರಮಿಸಿದರು. ನಗರದ ಹಲವು ಕಡೆ ಸಾಮೂಹಿಕ ಬಣ್ಣ ಆಚರಣೆ ಜೊತೆ ಡಿಜೆ ಹಾಡಿಗೆ ಸ್ಟೆಪ್ ಹಾಕಿ ಯುವಕರು ಜಖತ್ ಎಂಜಾಯ್ ಮಾಡಿದರು. ನಗರದಾದ್ಯಂತ ಹೋಳಿ ಸಂಭ್ರಮ