ಕೋಲಾರ : ತಮಿಳುನಾಡು ಮತ್ತು ಕರ್ನಾಟಕ ಬಾಂಧವ್ಯ ಚೆನ್ನಾಗಿರಲು ಹಲವು ವಿಚಾರಗಳಿವೆ.ಆದ್ರೆ ಕಾಂಗ್ರೆಸ್ 2 ರಾಜ್ಯಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೋಲಾರದಲ್ಲಿ ಹೇಳಿದರು.ಕೋಲಾರದ ಕೆಜಿಎಫ್ ನಗರದಲ್ಲಿ ಭಾನುವಾರ ಬಿಜೆಪಿ ಸಮಾವೇಶ ಮಾಡುವ ಮೂಲಕ ತಮಿಳು ಮತಗಳನ್ನು ಸೆಳೆಯಲು ಬಿಜೆಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೂ ಮುನ್ನ ಅಣ್ಣಾಮಲೈ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮೇಕೆದಾಟು ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನು ಎಂಬುದಕ್ಕೆ ಪ್ರತಿಕ್ರಿಯೆ ನೀಡಿದರು. ತಮಿಳುನಾಡು