ಬೆಂಗಳೂರು: ಮನೆಯೊಂದರಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಸಂಜಯ್ ನಗರ ಪೊಲೀಸರು ಬಾಬು ಎಂಬಾತನನ್ನು ಬಂಧಿಸಿದ್ದಾರೆ. ಈತ 15 ವರ್ಷಗಳ ಬಳಿಕ ಕಳ್ಳತನ ಮಾಡುವ ದಂಧೆಗೆ ಇಳಿದಿದ್ದನಂತೆ.ಇದಕ್ಕೆಲ್ಲಾ ಕಾರಣ ಲಾಕ್ ಡೌನ್. 15 ವರ್ಷಗಳ ಹಿಂದೆ ಕೆಜಿಎಫ್ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ ಬಾಬು ಬಳಿಕ ಈ ವೃತ್ತಿ ಬಿಟ್ಟು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಆದರೆ ಲಾಕ್ ಡೌನ್ ನಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದು ಸಂಸಾರ ತೂಗಿಸಲು