ತಡರಾತ್ರಿ ಭಾರಿ ಕಳ್ಳತನಕ್ಕೆ ಕೈ ಹಾಕಿ ಕಳ್ಳರು ವಿಫಲಗೊಂಡ ಘಟನೆ ನಡೆದಿದೆ.ಒಂದೇ ರಾತ್ರಿ 3 ಅಂಗಡಿಗಳಲ್ಲಿ ದೋಚಲು ಮುಂದಾಗಿ ಬಾಗಿಲುಗಳನ್ನು ಮೀಟಿದ್ದಾರೆ ಡಕಾಯಿತರು. ಸಿಸಿಟಿವಿ ಇದ್ದರೂ ಲೆಕ್ಕಿಸದೆ ಕಳ್ಳತನಕ್ಕೆ ಮುಂದಾಗಿದ್ದಾರೆ ಖದೀಮರು. ನಂಜನಗೂಡು ಪಟ್ಟಣದಲ್ಲಿ ನಿಲ್ಲದ ಡಕಾಯಿತರ ಹಾವಳಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿರುವ ಘಟನೆ ಇದಾಗಿದೆ. ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿರುವ ನಂದಿನಿ ಹಾರ್ಡ್ವೇರ್, ವರ್ಧಮಾನ ಹಾರ್ಡ್ವೇರ್ ಹಾಗೂ ಈಗಲ್ ಪ್ಯಾಲೇಸ್ ಅಂಗಡಿಯಲ್ಲಿ ಬಾಗಿಲುಗಳನ್ನು ಮಿಟಿರುವ ಡಕಾಯಿತರು