ಮೋಜು ಮಸ್ತಿ ಮಾಡಲು ಬಿಗ್ರೇಡ್ ರೋಡ್ ಗೆ ಹೋಗಿದ್ದ ಟೆಕ್ಕಿಯನ್ನ ಅಪಹರಿಸಿ ಲಕ್ಷಾಂತರ ರೂಪಾಯಿ ದೋಚಿದ್ದ ನಾಲ್ವರು ಅಪಹರಣಕಾರರನ್ನು ಅಶೋಕನಗರ ಪೊಲೀಸರು ಸೆರಹಿಡಿದಿದ್ದಾರೆ.ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರಾಹುಲ್ ವೈರಾಧ್ಯನನ್ನ ಅಪಹರಿಸಿದ ಆರೋಪದಡಿ ತರುಣ್ ಗಣೇಶ್, ಮಣಿಕಂಠ, ವಿಘ್ನೇಶ್ ಹಾಗೂ ಚೇರಿಶ್ ಎಂಬುವರನ್ನು ಬಂಧಿಸಲಾಗಿದೆ. ಹೂಡಿಯ ಸೀತರಾಮಪಾಳ್ಯ ನಿವಾಸಿಯಾಗಿರುವ ರಾಹುಲ್ ಕಳೆದ ತಿಂಗಳು 26ರಂದು ಕಾರಿನಲ್ಲಿ ಕಲ್ಯಾಣ ನಗರಕ್ಕೆ ತೆರಳಿ ಅಲ್ಲೇ ಕಾರು ಪಾರ್ಕಿಂಗ್ ಮಾಡಿ ಚಾಲಕನಿಗೆ ತಿಳಿಸಿ