Widgets Magazine

‘ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣ್ತಿರೋ ಸಿದ್ದರಾಮಯ್ಯ’

ಮಂಗಳೂರು| Jagadeesh| Last Modified ಶುಕ್ರವಾರ, 8 ನವೆಂಬರ್ 2019 (13:29 IST)
ವಿಧಾನ ಸಭೆ ವಿಪಕ್ಷ ನಾಯಕ ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ. ಹೀಗಂತ ಸಚಿವರೊಬ್ಬರು ಕಟುಟೀಕೆ ಮಾಡಿದ್ದಾರೆ.  

ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಹುಡುಕುವಂಥ ಸ್ಥಿತಿಯಾಗಿದೆ. ಸಿದ್ದರಾಮಯ್ಯ ಬೆಂಬಲಿಗರು ಡಿಕೆ ಶಿವಕುಮಾರ್ ಪರವಾಗಿ ಮೆರವಣಿಗೆ ನಡೆಸಿದ್ದಾರೆ.  

ಡಿಕೆ ಶಿವಕುಮಾರ್ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ. ಹೀಗಂತ ಸಚಿವ ವ್ಯಂಗ್ಯವಾಡಿದ್ದಾರೆ.  
ಕಾಂಗ್ರೆಸ್ ರಾಜ್ಯದಲ್ಲಿ ಛಿದ್ರವಾಗಿದ್ದರೂ ಭಂಡತನ ಬಿಟ್ಟಿಲ್ಲ. ಡಿಕೆ ಶಿವಕುಮಾರ್ ರನ್ನು ಮೆರವಣಿಗೆ ಮಾಡಲು ಏನು ಕೇಸಿನಿಂದ ಹೊರಬಂದಿದ್ದಾರೆಯೇ ?  ಮರ್ಯಾದೆ ಇಲ್ಲದೆ ಮೆರವಣಿಗೆ ಮಾಡ್ತಿದಾರೆ, ಜನ ಉಗೀತಿದ್ದಾರೆ.  

ಈಗಾಗ್ಲೇ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅನರ್ಹ ಶಾಸಕರ ಬಗ್ಗೆ ಇಂದು ತೀರ್ಪು ಬರಲಿದೆ. ಏನು ತೀರ್ಪು ಬರುತ್ತೋ ಆ ಪ್ರಕಾರ ನಡೆದುಕೊಳ್ತೇವೆ ಎಂದ್ರು.

ಶಾಸಕರ ರಾಜೀನಾಮೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಸತ್ಯ. ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯ ಮಾಡಲ್ಲ ಅಂತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :