ವಿದ್ಯಾರ್ಜನೆಗೆ, ಕೆಲಸಕ್ಕಾಗಿ ಗುಳೆ ಇಲ್ಲವೇ ಪ್ರವಾಸಕ್ಕೆ ಹೋದವರಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಬೆಂಗಳೂರಿಗೆ ಕೆಲಸಕ್ಕಾಗಿ ಗುಳೆ ಹೋಗಿದ್ದ ಅಥವಾ ಇತರೆ ಕೆಲಸ ಕಾರ್ಯಗಳ ಮೇಲೆ ತೆರಳಿದ್ದ ರಾಯಚೂರು ಜಿಲ್ಲೆಯ ಜನರನ್ನು ಹಲವು ಬಸ್ಸುಗಳಲ್ಲಿ ಕರೆ ತರಲಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಿಸುವವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ವ್ಯಕ್ತಿಗಳನ್ನು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಮಾಡಲಾಗುವುದು. ಜಿಲ್ಲೆಗೆ ವಲಸೆ ಬಂದ ವ್ಯಕ್ತಿಗಳನ್ನು 14