ಕಾಂಗ್ರೆಸ್ ಅಂದರೆ ಪುಂಡರ ಗುಂಪು. ಅದನ್ನು ಅವರೇ ಬೀದಿಗೆ ಇಟ್ಟು ಪ್ರದರ್ಶಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಹುಚ್ಚರಿಗೆ ಅಮವಾಸ್ಯೆ, ಹುಣ್ಣಿಮೆ ಬಂದಾಗ ತಲೆ ಕೆಡುತ್ತದಂತೆ. ಹಾಗೆಯೇ ಕಾಂಗ್ರೆಸ್ಸಿಗರಿಗೂ ಆಗಿದೆ. ಹಿಂದುತ್ವವನ್ನು ಅನುಮಾನ ಪಡುವವರು ಅವರ ತಂದೆ ತಾಯಿಯನ್ನೂ ಅನುಮಾನ ಪಟ್ಟಂತೆಯೇ. ಕಾಂಗ್ರೆಸ್ನವರು ಕೇಸರಿ ಬಣ್ಣ ಕಂಡರೆ ಮೂರ್ಛೆ ಹೋಗುತ್ತಾರೆ. ಬಿಳಿ ಟೋಪಿ ಕಂಡರೆ ಟೋಪಿ ಹಾಕಿಸಿಕೊಂಡು ತಲೆ ಬಾಗುತ್ತಾರೆ