ಬೆಂಗಳೂರು: ಸತತ ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜಿ. ಪರಮೇಶ್ವರ, ಈಗ ಅದೇ ಗದ್ದುಗೆಯಲ್ಲಿ ಮುಂದುವರೆದು ಮುಂಬರುವ ಚುನಾವಣೆ ಎದುರಿಸುವ ಚಿಂತನೆಯಲ್ಲಿದ್ದಾರೆ. ಅದರ ಆರಂಭಿಕ ಹೆಜ್ಜೆಯೇ ನಾಲ್ಕು ದಿನದ ಹಿಂದೆ ನಡೆದ ಸುರಾಜ್ಯ ಸಮಾವೇಶ. ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಿಟ್ಟುಕೊಂಡು ಈ ಸಮಾವೇಶ ಏರ್ಪಡಿಸಲಾಗಿತ್ತು. ಮತ್ತೊಂದು ಬಾರಿ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಯಬೇಕೆಂದರೆ ಪರಮೇಶ್ವರ ಅವರಿಗೆ ಈ