ರಾಯಚೂರು: ಬಿಸಿಲ ನಾಡಿನಲ್ಲಿ ಕಣ್ಣು ಕಿವಿ ತಂಪಾಗಿಸಿಕೊಳ್ಳಲು ಬಿಸಿಲ ನಾಡು ರಾಯಚೂರಿನಲ್ಲಿ 82 ನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದ ಮುಖ್ಯ ಆಕರ್ಷಣೆ 3500 ಅಡಿ ಉದ್ದದ ನಾಡಧ್ವಜ. ಇದು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿದೆ.ಬೆಳಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಕ್ಷರ ಜಾತ್ರೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ನಗರದ ಕೃಷಿ ವಿವಿಯಲ್ಲಿ ನಡೆಯಲಿರುವ ಅಕ್ಷರ ಜಾತ್ರೆಯಲ್ಲಿ ಈ ಬಾರಿ 80 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ