ಮೈಸೂರು : ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರು ಪ್ರತಿಭಟನೆಗೆ ನಡೆಸಿದ ಹಿನ್ನಲೆಯಲ್ಲಿ ಸತ್ಯವಂತರಿಗೆ ಇದು ಕಾಲವಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಾನು ಸತ್ಯ ಹೇಳಿದರೆ ಕೆಲವರಿಗೆ ಅಪರ್ಥವಾಗುತ್ತದೆ. ಒಕ್ಕಲಿಗ ಸಮುದಾಯಕ್ಕೆ ಯಾರು ಆದರ್ಶ ಆಗಬೇಕು ಒಕ್ಕಲಿಗ ಸಮುದಾಯದವರೇ ತೀರ್ಮಾನ ಮಾಡಲಿ. ಶಾಂತವೇರಿ ಗೋಪಾಲಗೌಡರು, ಕೆಂಗಲ್ ಹನುಮಂತಯ್ಯ, ಕುವೆಂಪು ಅವರಂತಹ ಮಹನೀಯರು ಆದರ್ಶರಾಗಬೇಕೋ, ಯಾರು ಆದರ್ಶ ಆಗಬೇಕು ಎಂಬುದನ್ನು ತೀರ್ಮಾನ