Widgets Magazine

ರಾತ್ರಿಯ ವೇಳೆ ಹಸುವಿನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದಾತ ಅರೆಸ್ಟ್

ತಿರುವನಂತಪುರಂ| pavithra| Last Modified ಶುಕ್ರವಾರ, 16 ಅಕ್ಟೋಬರ್ 2020 (11:05 IST)
ತಿರುವನಂತಪುರಂ : ವ್ಯಕ್ತಿಯೊಬ್ಬ ರಾತ್ರಿಯ ವೇಳೆ ಹಸುವಿನ ಮೇಲೆ ಅಸಹಜ  ಲೈಂಗಿಕ ಕ್ರಿಯೆ ನಡೆಸಿದ ಘಟನೆ ಕೋಯಿಕ್ಕೋಡ್ ನ ಕುನ್ನಮಂಗಕಂ ಎಂಬಲ್ಲಿ ನಡೆದಿದೆ.

ಮುರಳೀಧರನ್ ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ಈತ ತಾನು ವಾಸವಿದ್ದ 20 ಮೈಲಿ ದೂರದಲ್ಲಿದ್ದ ಮನೆಯೊಂದರಲ್ಲಿ ಸಾಕಿದ ಹಸುವನ್ನು ರಾತ್ರಿ ವೇಳೆ ಕರೆದೊಯ್ದು ಅದರ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಬಳಿಕ ಹಸುವನ್ನು ಬಿಟ್ಟು ಓಡಿಹೋಗುತ್ತಿದ್ದ.

ಹಸು ಕಾಣಿಸದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ ಹಸುವಿನ ಮಾಲೀಕ ಕೊಟ್ಟಿಗೆಯಲ್ಲಿ ಸಿಸಿ ಕ್ಯಾಮರಾ ಕೂಡ ಫಿಕ್ಸ್ ಮಾಡಿದ್ದಾರೆ. ಹಾಗಾಗಿ ಈತನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :