ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ಬಿಜೆಪಿಗೆ ರಾಜ್ಯದ ಜನರು ಬಹುಮತ ನೀಡಿಲ್ಲ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬಂದ್ರೂ 104 ಸೀಟ್ ಬಂತು. ಈ ಬಾರಿ ಕೂಡ ಮೋದಿ, ಅಮಿತ್ ಶಾ ಬಂದ್ರೂ ಏನು ನಡೆಯಲ್ಲ ಎಂದು ಲೇವಡಿ ಮಾಡಿದ್ರು. ಕೈ ನಾಯಕರ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಜನಾಭಿಪ್ರಾಯ ಈ ಬಾರಿ ಕಾಂಗ್ರೆಸ್ ಪರವಾಗಿದೆ.