ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಬಿಡುವು ಪಡೆದಿರುವ ಮಳೆರಾಯ ಮತ್ತೆ ಈ ವಾರ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಂಗಳೂರು, ಪುತ್ತೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಗೆ ಕೊಂಚ ಬಿಡುವು ಸಿಕ್ಕಿದೆ. ಹೀಗಾಗಿ ಸಾರ್ವಜನಿಕರು ಕೊಂಚ ನಿರಾಳವಾಗುತ್ತಿರುವಂತೆಯೇ ಮತ್ತೆ ಈ ವಾರ ಭಾರೀ ಮಳೆಯಾಗುವ ಸೂಚನೆ ಸಿಕ್ಕಿದ್ದು, ಜನ ಆತಂಕಗೊಳ್ಳುವಂತೆ ಮಾಡಿದೆ.ಈಗಾಗಲೇ ದ.ಕ. ಜಿಲ್ಲೆಯಲ್ಲಿ ದಶಕದಲ್ಲೇ ದಾಖಲೆ ಎನ್ನುವಷ್ಟು ಮಳೆಯಾಗಿದೆ. ಇದೀಗ ಮತ್ತೆ