ಜಮೀನು ವಿವಾದ ಕಾರಣದಿಂದಾಗಿ ನಡುಬೀದಿಯಲ್ಲೇ ಎರಡು ಗುಂಪುಗಳ ಜನರು ಬಡಿದಾಡಿಕೊಂಡ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಹಳ್ಳಿಕೆರೆ ಹಾಗೂ ತೊಪ್ಪನಹಳ್ಳಿ ಗ್ರಾಮದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ 3 ಮಹಿಳೆಯರು ಸೇರಿದಂತೆ 5 ಜನರಿಗೆ ಗಾಯಗಳಾಗಿವೆ. ಹಳ್ಳಿಕೆರೆಯ ತಗಡಯ್ಯ ಎಂಬುವರಿಗೆ ಗಂಭೀರ ಗಾಯವಾಗಿದೆ.ಹಳ್ಳಿಕೆರೆ ಗ್ರಾಮದ ಪದ್ಮ, ನಾಗಮಣಿ, ಪುಟ್ಟಸ್ವಾಮಿ, ಪವಿತ್ರ, ಸೋಮಶೇಖರ್ ಹಾಗೂ ತೊಪ್ಪನಹಳ್ಳಿ ಗ್ರಾಮದ ಚನ್ನೇಗೌಡ, ಮುತ್ತುರಾಜು, ಮಧು,