ಗದಗ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೈಟೆಕ್ ಕಾರು ಕಳ್ಳರನ್ನ ಬಂಧಿಸಿದ್ದಾರೆ. ಬಂಧಿತರಿಂದ 66 ಲಕ್ಷ ರೂ ಮೌಲ್ಯದ10 ಕಾರುಗಳು ವಶಪಡಿಸಿಕೊಂಡಿರೋ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.ಕೊಪ್ಪಳ ಮೂಲದ ಭೀಮಪ್ಪ ಶೆಟ್ಟಿಬಲೀಜಗ, ಬಾಬಾ ಫಕ್ರುದ್ದೀನ ಪಿಂಜಾರ್ ಹಾಗೂ ಹುಬ್ಬಳ್ಳಿ ಮೂಲದ ಶಿವಕುಮಾರ ಪೂಜಾರ ಬಂಧಿತ ಆರೋಪಿಗಳು. ಇನ್ನೂ ಪ್ರಮುಖ ಆರೋಪಿಗಳಾದ ಬಂಟವಾಳ ಮೂಲದ ಮೊಹಮ್ಮದ್ ಹನೀಫ್ ಮತ್ತು ಉಡಪಿ ಮೂಲದ ಇಕಾಸ್ ಆರೋಪಿಗಳು ಪರಾರಿಯಾಗಿದ್ದು, ಪರಾರಿಯಾದ ಆರೋಪಿಗಳನ್ನು ಬಂಧಿಸಲು