ಬೆಂಗಳೂರು: ಪಾಕಿಸ್ತಾನ ಮೂವರು ನಾಗರಿಕರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಕುಮಾರಸ್ವಾಮಿ ಲೇಔಟ್ ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಇದ್ದಾರೆ. ಕಿರೋನ್ ಗುಲಾಂ ಅಲಿ, ಶಂಶೀರ್ ಶಂಶುದ್ದೀನ್ ಸಮಿರಾ ಅಬ್ದುಲ್ ರೆಹಮಾನ್ ಎಂದು ಇವರನ್ನು ಗುರುತಿಸಲಾಗಿದೆ.ಇವರ ಬಳಿ ಭಾರತದ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್ ನ ನಕಲಿ ಪತ್ರ ಇದ್ದಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.