ಬೆಂಗಳೂರು: ರಾಜಧಾನಿಯಲ್ಲಿ ವರುಣನ ಅಬ್ಬರ ಮುಂದುವರಿದು ನಿನ್ನೆ ಸುರಿದ ಭಾರೀ ಮಳೆಗೆ ದೇವಸ್ಥಾನದ ಅರ್ಚಕ ಸೇರಿದಂತೆ ಮೂವರು ಬಲಿಯಾಗಿದ್ದಾರೆ. ಕುರುಬರ ಹಳ್ಳಿ ವಾರ್ಡ್ ನ ಎಚ್ ಬಿಕೆ ಲೇಔಟ್ ಬಳಿಯ ದೇವಾಲಯದ ಅರ್ಚಕ ವಾಸುದೇವಾಚಾರ್ ರಾಜಾ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಮೃತದೇಹಕ್ಕಾಗಿ ಎನ್ ಡಿ ಆರ್ ಎಫ್ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದೆ.ಇನ್ನೊಂದೆಡೆ ಲಗ್ಗೆರೆಯಲ್ಲಿ ರಾಜಾಕಾಲುವೆ ಬಳಿಯಲ್ಲೇ ಇದ್ದ ತಾಯಿ, ಮಗಳು ನೀರಿನಲ್ಲಿ ಕೊಚ್ಚಿ