ಉಡುಪಿ : ನದಿಯಲ್ಲಿ ಚಿಪ್ಪು ಮೀನು ಹಿಡಿಯಲು ಹೋದ ನಾಲ್ವರಲ್ಲಿ ಮೂವರು ನೀರುಪಾಲಾಗಿದ್ದು, ಓರ್ವ ಕಣ್ಮರೆಯಾದ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಉಡುಪಿ ಮತ್ತು ಶೃಂಗೇರಿ ಮೂಲದ ಯುವಕರಾದ ಇಬಾಜ್, ಫಜಾನ್, ಸೂಫಾನ್ ಹಾಗೂ ಫರಾನ್ ರಂಜಾನ್ ಹಬ್ಬಕ್ಕೆ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಕುಕ್ಕುಡೆ ಕಿಣಿಯರ ಕುದ್ರು ಸಮೀಪದ ನದಿಗೆ ಸಂಜೆ ದೋಣಿಯಲ್ಲಿ ಮೀನು ಹಿಡಿಯಲು ಏಳು ಯುವಕರ ತಂಡ ತೆರಳಿತ್ತು. ಈ ವೇಳೆ ಅವಘಡ