ಬೆಂಗಳೂರು: ರಾಜ್ಯದ ಅದರಲ್ಲೂ ಬೆಂಗಳೂರಿನ ಮೂವರಿಗೆ ಹೊಸ ಪ್ರಭೇದದ ಕೊರೋನಾ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಬ್ರಿಟನ್ ನಿಂದ ಬೆಂಗಳೂರಿಗೆ ಬಂದಿದ್ದ ಮೂವರಿಗೆ ಹೊಸ ತಳಿಯ ಕೊರೋನಾ ಕಾಣಿಸಿಕೊಂಡಿರುವು ಖಚಿತವಾಗಿದೆ. ಡಿ.19 ರಂದು ಬ್ರಿಟಿಷ್ ಏರ್ ಲೈನ್ಸ್ ನಲ್ಲಿ ಇವರು ಭಾರತಕ್ಕೆ ಬಂದಿದ್ದರು. ಈ ಪೈಕಿ ಇಬ್ಬರು ಉತ್ತರ ಹಳ್ಳಿಯವರು ಮತ್ತು ಇನ್ನೊಬ್ಬರು ಜೆಪಿ ನಗರದವರು ಎಂದು ತಿಳಿದುಬಂದಿದೆ. ಹೊಸ ಪ್ರಭೇದದ ಕೊರೋನಾ ಕಂಡು ಬಂದ ಬೆನ್ನಲ್ಲೇ ಬಿಬಿಎಂಪಿ ಕಟ್ಟೆಚ್ಚರ ವಹಿಸಿದೆ.