ದಾವಣಗೆರೆ: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಕುರಿತಂತೆ ಬಂಧಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಕುರಿತಂತೆ ಈಗ ದಾವಣಗೆರೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.ಮೃತ ವ್ಯಕ್ತಿಯ ಪತ್ನಿ ಎರಡು ದಿನಗಳ ಮೊದಲು ತನ್ನ ಪತಿ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು. ಬಳಿಕ ಕುಟುಂಬಸ್ಥರಿಗೆ ಈ ವಿಚಾರವನ್ನು ಮಾತುಕತೆ ಮೂಲಕ ಪರಿಹರಿಸುವಂತೆ ತಿಳಿಸಿದ್ದರು.ಆದರೆ ಮರುದಿನ ಬಂಧಿತನ ಮೃತದೇಹ ಹತ್ತಿರದ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿತ್ತು.