ಕೌಟುಂಬಿಕ ಕಲಹದ ಹಿನ್ನೆಲೆ ಮೂವರು ಮಹಿಳೆಯರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಒಬ್ಬರು ಮೃತಪಟ್ಟಿರುವ ಘಟನೆ ಮಾಗಡಿಯಲ್ಲಿ ನಡೆದಿದೆ. ಮಾಗಡಿ ಟೌನ್ನ ನೇಯಿಗೆ ಬೀದಿ ನಿವಾಸಿಗಳಾದ ಮೂವರು ಮಾಗಡಿ ಟೌನ್ನ ಗೌರಮ್ಮನ ಕೆರೆಗೆ ಹಾರಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದು, ಮೃತ ಮಹಿಳೆಯನ್ನು ಅಜ್ಜಿ ಶಾಂತಾ ಭಾಯಿ (50) ಎಂದು ಗುರುತಿಸಲಾಗಿದೆ. ಭಾನುವಾರ ಈ ಮೂರು ಮಹಿಳೆಯರು ಕೆರೆಗೆ ಹಾರಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಉಷಾ ಭಾಯಿ