ಬೆಂಗಳೂರು: ಈಜಿಪುರದಲ್ಲಿ ಇಂದು ಬೆಳಿಗ್ಗೆ ಬಹುಮಹಡಿ ಕಟ್ಟಡ ಕುಸಿದು ನಾಲ್ವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಮೂರು ವರ್ಷದ ಬಾಲಕಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾಳೆ. ಸಿಲಿಂಡರ್ ಸ್ಪೋಟಗೊಂಡು ಕಟ್ಟಡ ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಆದರೆ ಅದೃಷ್ಟವಶಾತ್ ಮೂರು ವರ್ಷದ ಬಾಲಕಿ ಸಂಜನಾ ಬದುಕುಳಿದಿದ್ದಾಳೆ.ಜೀವದ ಹಂಗು ತೊರೆದು ರಕ್ಷಣಾ ಕಾರ್ಯಕ್ಕೆ ಮುನ್ನುಗ್ಗಿದ ಅಗ್ನಿ ಶಾಮಕ ದಳದ ಸಿಬ್ಬಂದಿಯ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ.