ನವರಾತ್ರಿಯ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಹಿಂದೂಗಳು ಸೇರಿ ಗರ್ಬಾ ನೃತ್ಯ ಮಾಡ್ತಾರೆ. ಆದರೆ ಗರ್ಬಾ ನೃತ್ಯ ಮಾಡ್ತಿದ್ದ ಸ್ಥಳಕ್ಕೆ ಮೂವರು ಯುವಕರು ನುಗ್ಗಿದ್ದಾರೆ ಎಂದು ಆರೋಪಿಸಿ ಮೂರು ಜನ ಯುವಕರಿಗೆ ಧರ್ಮದೇಟು ಹಾಕಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕೆಲವು ಯುವಕರು ಗರ್ಬಾ ಪಂಗಡಕ್ಕೆ ಪ್ರವೇಶಿಸಿದ್ದಾರೆ. ಅವರನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ ಎಂದು ಉಜ್ಜಯಿನಿ CSP ವಿನೋದ್ ಮೀನಾ ಮಾಹಿತಿ ನೀಡಿದ್ದಾರೆ.