ಕತ್ತಲ ರಾತ್ರಿಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಭೂಪನನ್ನು ಕಂಬಕ್ಕೆ ಕಟ್ಟಿ ಜನರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಅಡಿಕೆ ಕದಿಯಲು ಬಂದ ಯುವಕರನ್ನು ರೈತರು ಹಿಡಿದು ಕಂಬಕ್ಕೆ ಕಟ್ಟಿದ ಘಟನೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.ಕಳೆದ ಆರು ತಿಂಗಳಿನಿಂದ ಬೂಕನಕೆರೆ ಗ್ರಾಮದ ಸುತ್ತಮುತ್ತಲಿನ ಅಡಿಕೆ ತೋಟಗಳು ಹಾಗೂ ಅಡಿಕೆ ಗೋದಾಮಿನಲ್ಲಿ ಕಳ್ಳತನ ಮಾಡುತ್ತಿದ್ದ ಯುವಕರು, ಗ್ರಾಮಸ್ಥರ ನಿದ್ದೆಗೆಡಿಸಿದ್ದರು. ಹೊಸಹೊಳಲು ಗ್ರಾಮದ ಚಂದು