ಬೆಂಗಳೂರು : ಮದುವೆಯಾಗುತ್ತೇನೆಂದು ನಂಬಿಸಿ ಟಿಕ್ ಟಾಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ವ್ಯಕ್ತಿಯಿಂದ ಲಕ್ಷಗಟ್ಟಲೆ ಹಣ ವಸೂಲಿ ಮಾಡಿ ಮೋಸ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವಿಜಯಲಕ್ಷ್ಮೀ ವಂಚಿಸಿದ ಮಹಿಳೆಯಾಗಿದ್ದು , ಶಿವಕುಮಾರ್ ಮೋಸ ಹೋದ ವ್ಯಕ್ತಿ. ಟಿಕ್ ಟಾಕ್ ನಲ್ಲಿ ಪರಿಚಯವಾದ ಇಬ್ಬರು ಬಳಿಕ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಮೊಬೈಲ್ ನಂಬರ್ ಪಡೆದು ಚಾಟ್ ಮಾಡುತ್ತಿದ್ದರು, ಬಳಿಕ ಇಬ್ಬರು ಒಪ್ಪಿ ಒಂದೇ ಮನೆಯಲ್ಲಿ ವಾಸವಾಗಿದ್ದರು.