ಟಿಪ್ಪು ಸುಲ್ತಾನ್ ಕೊಲೆಗಡುಕ, ದೇಶದ್ರೋಹಿ, ಹಿಂದು ವಿರೋಧಿ ಎಂದು ಬಿಜೆಪಿ ಕಟುವಾಗಿ ವಿರೋಧಿಸುತ್ತಿರುವ ಮಧ್ಯೆಯೇ, ಬಿಜೆಪಿ ಶಾಸಕ ಆನಂದ್ ಸಿಂಗ್ ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಬಿಜೆಪಿ ವರಿಷ್ಠರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿಯ ಇತರ ಮುಖಂಡರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಕಚೇರಿಯ ಮುಂದೆಯೇ ಟಿಪ್ಪು ಜಯಂತಿ ಆಚರಿಸಿದ ಆನಂದ್ ಸಿಂಗ್, ಬಿಜೆಪಿ ವರಿಷ್ಠರ ವಿರೋಧ ಕಟ್ಟಿಕೊಂಡಂತಾಗಿದೆ. ಬಳ್ಳಾರಿಯ ಹೊಸಪೇಟೆಯಲ್ಲಿ ಮುಸ್ಲಿಂ ಸಮುದಾಯ ಸಂಖ್ಯೆ ಅಧಿಕವಾಗಿರುವುದರಿಂದ ಟಿಪ್ಪು ಜಯಂತಿ ಆಚರಿಸದಿದ್ದರೆ,