ಭಾರೀ ವಿವಾದ ಕೆರಳಿಸಿದ್ದ ಟಿಪ್ಪು ಸುಲ್ತಾನ್ ಪಠ್ಯದಲ್ಲಿ ನಿರೀಕ್ಷೆಯಂತೆ ರಾಜ್ಯ ಶಿಕ್ಷಣ ಇಲಾಖೆ ಕತ್ತರಿ ಆಡಿಸಿದ್ದು, ಕೇವಲ 2 ಸಾಲಿನಲ್ಲಿ ಪಾಠ ಮುಗಿಸಿದೆ. ಸೋಮವಾರದಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗಿದ್ದು, 10ನೇ ತರಗತಿಯ ಸಮಾಜ ವಿಜ್ಞಾನ ಪಾಠದಲ್ಲಿ ಟಿಪ್ಪುಸುಲ್ತಾನ್ ಪಠ್ಯಕ್ಕೆ ರಾಜ್ಯ ಸರಕಾರ ಕತ್ತರಿ ಹಾಕಿದ್ದು, ಹಲವು ಮಹತ್ವದ ವಿಷಯಗಳನ್ನು ತೆಗೆದು ಹಾಕಿದೆ. ಟಿಪ್ಪು ಸುಲ್ತಾನ್ ಅವರಿಗೆ ಮೈಸೂರು ಹುಲಿ ಎಂಬ ಬಿರುದು ಇದ್ದು, ಅದನ್ನು ಪಠ್ಯದಿಂದ ತೆಗೆದು ಹಾಕಲಾಗಿದೆ. ಟಿಪ್ಪು