ಯಾದಗಿರಿ : ನಗರದ ಹತ್ತಿಕುಣಿ ಸರ್ಕಲ್ ಬಳಿ ಇರುವ ವಿವಾದಿತ ಟಿಪ್ಪು ಸರ್ಕಲ್ ವಿವಾದ ತೀವ್ರ ಜಟಾಪಟಿಗೆ ಕಾರಣವಾಗಿದ್ದು, ಎರಡು ಕೋಮುಗಳ ನಡುವಿನ ಸಾಮರಸ್ಯಕ್ಕೆ ಕೊಳ್ಳಿ ಇಟ್ಟಿದೆ. ಇಂದು ಶಿವಾಜಿ ಸಂಘಟನೆಯಿಂದ ಸರ್ಕಲ್ ತೆರವುಗೊಳಿಸೋದಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಂಘರ್ಷದ ಮುನ್ಸೂಚನೆ ಅರಿತ ಪೊಲೀಸರು ತೀವ್ರ ನಿಗಾವಹಿಸಿದ್ದು, 144 ಸೆಕ್ಷನ್ ಜಾರಿಗೊಳಿಸಿದ್ದಾರೆ.ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಯಾದಗಿರಿ ನಗರದಲ್ಲೀಗ ಟಿಪ್ಪು ಸರ್ಕಲ್ ವಿವಾದ ಶುರುವಾಗಿದ್ದು,