ಬೆಂಗಳೂರು: ಮಗ ರಾಕೇಶ್ ಸತ್ತಾಗ ಪುತ್ರಶೋಖದಿಂದ ಕಣ್ಣೀರಿಟ್ಟ ಸಿದ್ದರಾಮಯ್ಯ ನವರೇ, ಕೊಡಗಿನ ಜನ ತಮ್ಮ ಮಕ್ಕಳನ್ನು ಕಳೆದುಕೊಂಡಾಗ ಅನುಭವಿಸಿದ ನೋವು ನಿಮಗೆ ಅರ್ಥವಾಗಲಿಲ್ಲವೇ ಎಂದು ಅದ್ದಂಡ ಕಾರ್ಯಪ್ಪ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ವಿರೋಧಿ ಹೋರಾಟ ಸಮಿತಿ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅದ್ದಂಡ ಕಾರ್ಯಪ್ಪ, ಟಿಪ್ಪುವಿನಿಂದಾಗಿ ಇಡೀ ಕುಟುಂಬವೇ ಹತ್ಯೆಗೀಡಾದ ಕುಟುಂಬದಿಂದ ಬಂದವನು ನಾನು. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಸಿದ್ದರಾಮಯ್ಯ