ಆಕೆ ಬಡತನದಲ್ಲೇ ಬೆಳೆದವಳು.ಬದುಕಿನ ಬಗ್ಗೆ ಕನಸು ಕಟ್ಟಿಕೊಂಡಿದ್ದವಳು.ಸ್ವಂತದ್ದೊಂದು ಮನೆ ಮಾಡಬೇಕೆಂಬ ಆಸೆ ಹೊಂದಿದ್ದವಳು.ಆದರೆ ವಿಧಿಯಾಟವೇ ಬೇರೆಯಾಗಿತ್ತು.ಭಾನುವಾರ ಅಂತಾ ಸ್ನೇಹಿತನ ಜೊತೆಗೆ ಸ್ಕೂಟರ್ ಹತ್ತಿ ಹೋದವಳು ಮನೆ ಸೇರೊ ಮುಂಚಿಯೇ ಸಾವಿನ ಮನೆ ಸೇರಿದ್ದಾಳೆ.ಚೆಲುವೆಯ ಹೆಸರು ಸುಲೋಚನ.ಇನ್ನೂ 24 ರ ಹರೆಯ.ಮಂಡ್ಯ ಮೂಲದ ಸುಲೋಚನ ಕುಟುಂಬ ಜಯನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ರು.ಈಕೆಯ ತಾಯಿ ಮನೆಗೆಲಸ ಮಾಡಿ ಮಗಳನ್ನ ಓದಿಸಿದ್ರು..ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಒಂದೂವರೆ ವರ್ಷದ ಹಿಂದೆ ಕೋರಮಂಗಲದಲ್ಲಿರುವ ಕಂಪನಿ ಒಂದರಲ್ಲಿ