ಮೈಸೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಕೆಟ್ಟದ್ದಾಗಿ ಕಮೆಂಟ್ ಮಾಡುವವರಿಗೆ ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಲೈವ್ ನಲ್ಲೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. `ಬಾಯಿ ಬಂದ ಹಾಗೆ ಕಮೆಂಟ್ ಮಾಡೋದು ಸರಿಯಲ್ಲ. ನನಗೂ ಎಲ್ಲಾ ಭಾಷೆಯಲ್ಲೂ ಬೈಯೋಕೆ ಬರುತ್ತೆ. ಉತ್ತರ ಕರ್ನಾಟಕ, ತುಳು ಭಾಷೆಯಲ್ಲೂ ನಾನು ಮಾತಾಡುತ್ತೇನೆ. ಆದರೆ ನನಗೆ ನಿಮ್ಮ ಸಂಸ್ಕೃತಿ ಇಲ್ಲ. ಎಲ್ಲರಿಗೂ ಒಂದೊಂದು ಪಕ್ಷ ಇರುತ್ತೆ. ಹಾಗಂತ ಬಾಯಿಗೆ ಬಂದ ಹಾಗೇ ಇನ್ನೊಬ್ಬರನ್ನು ಟೀಕಿಸಬಾರದು.