ಶಾಲಾ ಮಕ್ಕಳಿಂದ ಶೌಚಾಲಯ ಕ್ಲಿನಿಂಗ್

ಚಿಕ್ಕೋಡಿ, ಬುಧವಾರ, 11 ಜುಲೈ 2018 (16:22 IST)


 ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಒಂದು ಕಡೆ ಆದರೆ ಇನ್ನೊಂದು ಕಡೆ ಶಾಲೆಗೆ ಬರುವ ಮಕ್ಕಳಿಂದ ಕೆಲಸವನ್ನು ಶಿಕ್ಷಕ ವೃಂದ ಮಾಡಿಸಿಕೊಳ್ಳುತ್ತಿದೆ.  ಇನ್ನೂ ಬಡವರಿಗೆ ಸರಕಾರಿ ಶಾಲೆಗಳೆ ಗತಿಯಾಗುತ್ತದೆ. ಮಕ್ಕಳು ಚನ್ನಾಗಿ ಓದಿ ವಿದ್ಯಾವಂತರಾಗಲ್ಲಿ ಎನ್ನುವ ನಿಟ್ಟಿನಲ್ಲಿ ಸರ್ಕಾರ ಇನ್ನಿಲ್ಲದ ಸೌಲಭ್ಯ ಕಲ್ಪಿಸುತ್ತಿದೆ. ಆದರೂ ಮಕ್ಕಳ ಗೋಳು ಹೇಳತೀರದು. ಅದಕ್ಕೆ ತಾಜಾ ಉದಾಹರಣೆ ಮಕ್ಕಳನ್ನು ಸ್ವಚ್ಚತೆಗೆ ಬಳಸಿಕೊಳ್ಳುತ್ತಿರುವುದು.

ಚಿಕ್ಕ ಮಕ್ಕಳನ್ನು ಶಾಲೆಯ ಶೌಚಾಲಯ ಸ್ವಚ್ಚತೆಗೆ ಬಳಸಿಕೊಂಡ ಘಟನೆ ಶೈಕ್ಷಣಿಕ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರಡಾಣ ಕ್ರಾಸ್ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲಾ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಅಪರಾಧವಿದ್ದರು, ಮಕ್ಕಳನ್ನು ಶೌಚಾಲಯ ತೊಳೆಯಲು ಬಳಸಿರುವ ಶಿಕ್ಷಕರು ಅಮಾನವೀಯ ವರ್ತನೆ ತೋರಿದ್ದಾರೆ. ಒಂದು ವೇಳೆ ಮಕ್ಕಳನ್ನು ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಂಡರೂ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಶಿಕ್ಷಣ ಅಧಿಕಾರಿಗಳಿಗೆ ಇದ್ದರೂ ಕಣ್ಣು ಮುಚ್ಚಿ ಕುಳಿತಿರುವುದು ಸುಳ್ಳಲ್ಲ.

ಸರಕಾರಿ ಶಾಲೆಯಲ್ಲಿ ಮಕ್ಕಳನ್ನು ಕೆಲಸ ಕಾರ್ಯಗಳಿಗಾಗಿ ಬಳಸಿಕೊಳ್ಳುತ್ತಿರುವ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಮಾನವೀಯ ತೋರುತ್ತಿರುವುದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ಸಾರ್ವಜನಿಕರ ಕೆಂಗ್ಗಣ್ಣಿಗೆ ಗುರಿಯಾವುವ ಲಕ್ಷಣಗಳು ಗೋಚರಿಸುತ್ತಿವೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಾಳೆ ಬುಡದಲ್ಲಿ ಆದ ಪವಾಡವಾದ್ರೂ ಏನು ಗೊತ್ತಾ?

ಇದು ಪವಾಡ ಕ್ಷೇತ್ರ ಅನ್ನೋದಿಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಹೌದು ಅಂಥ ಪವಾಡ ಕ್ಷೇತ್ರ ಯಾವುದು ಆ ...

news

ಪಂಚಭೂತಗಳಲ್ಲಿ ಲೀನವಾದ ವೀರ ಯೋಧ ಸಂತೋಷ

ಆ ಗ್ರಾಮದಲ್ಲಿ ಇಡೀ ಊರಿಗೆ ಊರೇ, ಕಂಬನಿ ಮಿಡಿದಿತ್ತು. ಅಮರ ರಹೇ ಸಂತೋಷ ಅಮರ ರಹೇ ಅಂತಾ ಘೋಷಣೆ ಎಲ್ಲಡೆ ...

news

ಹೆದ್ದಾರಿ ದಾಟಿ ದುಸ್ಥಿತಿಯಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳು

ರಾಜ್ಯದಗಡಿ ತಾಲ್ಲೂಕಿನ ಹಳ್ಳಿ ಗ್ರಾಮದ ಮಕ್ಕಳು ನಿತ್ಯವೂ ಶಾಲೆಗೆ ಹೋಗಲು ಪರದಾಡುವಂತಹ ಸ್ಥಿತಿ ...

news

ಗುಪ್ತಾಂಗದಲ್ಲಿ ಕೊಕೇನ್ ಇಟ್ಟುಕೊಂಡು ಸಾಗಿಸುತ್ತಿದ್ದ ಮಹಿಳೆ ಅಧಿಕಾರಿಗಳ ಬಲೆಗೆ ಬಿದ್ಲು!

ಕೋಲ್ಕತ್ತಾ : 30 ವರ್ಷದ ಡೇವಿಡ್ ಬ್ಲೆಸ್ಸಿಂಗ್ ಎಂಬ ನೈಜೀರಿಯನ್ ಮಹಿಳೆ ತನ್ನ ಗುಪ್ತಾಂಗದಲ್ಲಿ 12 ಗ್ರಾಂ ...