ಜೆಡಿಎಸ್ ರಾಜ್ಯಾಧ್ಯಕ್ಷರ ಹುದ್ದೆಗೆ ನಾಳೆ ಚುನಾವಣೆ ನಡೆಯಲಿದೆ. ಬೇರೆಯವರು ಜವಾಬ್ದಾರಿ ಹೊರಲು ಸಿದ್ದವಾದರೆ ನನ್ನ ಸಮ್ಮತಿಯಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ರಾಜ್ಯಾಧ್ಯಕ್ಷರ ಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿಯನ್ನೇ ನಿಲ್ಲಿಸಬೇಕು ಎಂದಿಲ್ಲ. ಬೇರೆಯವರು ಪಕ್ಷದ ಹೊಣೆ ಹೊರಲು ಸಿದ್ದವಾದರೆ ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಜೆಡಿಎಸ್ ಪಕ್ಷ ಅಪ್ಪ ಮಕ್ಕಳ ಪಕ್ಷವಲ್ಲ. ಪಕ್ಷದ ಹಿತಕ್ಕಾಗಿ ದುಡಿಯಲು ಯಾರೇ ಮುಂದೆ ಬಂದರೂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಸ್ವೀಕರಿಸಲು ಪಕ್ಷ ಸಿದ್ದವಿದೆ ಎಂದು ಸ್ಪಷ್ಟಪಡಿಸಿದರು.