ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರೆಂದು ಅಥವಾ ಗೋ ಹಂತಕರೆಂದು ಅನುಮಾನಗೊಂಡು ಅಂತಹವರ ಮೇಲೆ ಕೆಲವರಿಂದ ಕಾನೂನುಬಾಹಿರವಾಗಿ ಗುಂಪು ಹಲ್ಲೆ ನಡೆಸಿರುವುದು ಅಥವಾ ಗುಂಪು ಹತ್ಯೆ ಮಾಡಿರುವ ಪ್ರಕರಣಗಳು ಸಂಭವಿಸಿವೆ. ಈ ರೀತಿ ಅಮಾನುಷ ಅಥವಾ ಬರ್ಬರ ಹತ್ಯೆಯಿಂದ ಪ್ರಕರಣಗಳು ಕರ್ನಾಟಕ ರಾಜ್ಯದಲ್ಲಿ ಮರುಕಳಿಸದಂತೆ ರಾಜ್ಯ ಪೊಲೀಸ್ ಇಲಾಖೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.ಪ್ರತಿ ಜಿಲ್ಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮತ್ತು ಅವರಿಗೆ ನೆರವಾಗಲು ಮೇಲ್ದರ್ಜೆಯ