ಮೈಸೂರು, ಅ 03 : ಮೈಸೂರಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ಕೊರೊನಾ ಸಂಕಷ್ಟದ ಕಾಲದ ಮಧ್ಯೆ ಆಚರಿಸಲಾಗುತ್ತಿರುವ ದಸರೆಯ ಸಂಭ್ರಮದೊಂದಿಗೆ ಪ್ರವಾಸೋದ್ಯಮ ಕೂಡ ಚಿಗುರುತ್ತಿದೆ. ಬರೋಬ್ಬರಿ 6 ತಿಂಗಳ ಬಳಿಕ ಮೈಸೂರು ಕಡೆಗೆ ಸಾವಿರಾರು ಪ್ರವಾಸಿಗರು ದೌಡಾಯಿಸಿದ್ದಾರೆ. ಸೊರಗಿದ್ದ ಪ್ರವಾಸೋದ್ಯಮಕ್ಕೆ ಪ್ರವಾಸಿಗರು ಸಂಜೀವಿನಿಯಾಗಿ ಬಂದಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೀಗ ದಸರೆಯ ಸಂಭ್ರಮ ಜೋರಾಗಿದ್ದು, ಇದರ ನಡುವೆ ವೀಕೆಂಡ್ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ನಗರಕ್ಕೆ ಪ್ರವಾಸಿಗರು ಬರುತ್ತಿರುವುದು ಪ್ರವಾಸೋದ್ಯಮವನ್ನೇ