ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ತಮ್ಮದುಎಂದು ಹೇಳಿಕೊಳ್ಳುತ್ತಾರೆ. ಮಂಡ್ಯ ರೈತರು ಭೂಮಿ ಕೊಡದೇ ಮೇಲಿನಿಂದ ಹಾರಿ ಹೋಗ್ತಿರಾ ಎಂದು ಸಂಸದ ಪ್ರತಾಪ್ ಸಿಂಹಗೆ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ದಶಪಥ ರಸ್ತೆ ಮೈಸೂರಿನದ್ದು, ಅದರ ಕ್ರೆಡಿಟ್ ಮಂಡ್ಯ, ರಾಮನಗರದವರು ತಮ್ಮದೆಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಂಡ್ಯ ಜನರನ್ನು ಲೆಕ್ಕಿಸದೇ ಮೈಸೂರು ಎನ್ನುವುದನ್ನು ನಾನು ಒಪ್ಪಲಾರೆ. ಬೆಂಗಳೂರಿನಿಂದ