ಒಂದೆಡೆ ಮೆಟ್ರೋ ಕಾಮಗಾರಿ ಮತ್ತೊಂದೆಡೆ ಎಲಿವೆಟೆಡ್ ಪ್ಲೇಓವರ್ ರಿಪೇರಿಯಿಂದ ಸಂಚಾರದಟ್ಟಣೆ ಅಧಿಕವಾಗಿ ರಾಜಧಾನಿಗರು ಇಂದು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು.ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಮೂರ್ನಾಲ್ಕು ಕಿಲೋಮೀಟರ್ ಉದ್ದ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಬೆಂಗಳೂರು- ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 7 ಟ್ರಾಫಿಕ್ ಜಾಮ್ ನಿಂದ ಕೂಡಿತ್ತು. ಬೊಮ್ಮನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರದವರೆಗೂ ಸಂಚಾರ ದಟ್ಟಣೆ ಅಧಿಕವಾಗಿತ್ತು.15 ಕಿಲೋಮೀಟರ್ ಕ್ರಮಿಸಲು 3 ಗಂಟೆ ತೆಗೆದುಕೊಂಡರು ವಾಹನ ಸವಾರರು.