ಪಿಎಸ್ಐ ನೇಮಕಾತಿಯಲ್ಲಿ ಪರೀಕ್ಷೆ ಬರೆದ ಟಾಪ್ 10 ರ್ಯಾಂಕ್ ನಲ್ಲಿ ಟ್ರಾಫಿಕ್ ಪೋಲಿಸ್ ಕಾನ್ಸ್ ಟೇಬಲ್ ಕೂಡ ಒಬ್ಬನಾಗಿದ್ದಾನೆ.545 ಅಭ್ಯರ್ಥಿಗಳಲ್ಲಿ ಟಾಪ್ 10 ರ್ಯಾಂಕ್ ಲೀಸ್ಟ್ ನಲ್ಲಿ ಬೆಂಗಳೂರಿನ ಜೀವನ್ ಭೀಮಾ ನಗರದ ಟ್ರಾಫಿಕ್ ಪೋಲಿಸ್ ಕಾನ್ಸ್ ಟೇಬಲ್ ಕೂಡ ಒಬ್ಬನಾಗಿದ್ದಾನೆ. ಓಎಂಆರ್ ಶೀಟ್ ಪರಿಶೀಲನೆ ವೇಳೆ ಕಾರ್ಬನ್ ಶೀಟ್ ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಿಐಡಿ ಪೋಲಿಸರು ಪೋಲಿಸ್ ಕಾನ್ಸ್ ಟೇಬಲ್ ನನ್ನು ಬಂಧಿಸಿದ್ದಾರೆ.ಈ ಹಗರಣದಲ್ಲಿ 12 ಅಭ್ಯರ್ಥಿಗಳು ಅಕ್ರಮ ಎಸಗಿರುವುದು ಸ್ಪಷ್ಟವಾಗಿರುವ ಕಾರಣ ಇವರನ್ನೆಲ್ಲಾ ಅರೆಸ್ಟ್ ಮಾಡಿರುವ ಸಿಐಡಿ ಪೋಲಿಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದಾರೆ.ಇವರ ಜೊತೆಗೆ ಇನ್ನು ಹತ್ತು ಅಭ್ಯರ್ಥಿಗಳು ಕೂಡ ಹಗರಣದಲ್ಲಿ ಭಾಗಿಯಾಗಿದ್ದು, ಅವರು ಸಿಐಡಿ ಪೋಲಿಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದಾರೆ. ಇಪ್ಪತ್ತು ದಿನವಾದರೂ ಖಾಕಿ ಬಲೆಗೆ ಬೀಳದೆ ಚಳ್ಳೆಹಣ್ಣ ತಿನ್ನಿಸುತ್ತಿದ್ದಾರೆ.