ಶೂಟಿಂಗ್ ವೇಳೆ ಸಾಹಸ ಕಲಾವಿದ ದುರ್ಮರಣ: ನಿರ್ದೇಶಕ ಸೇರಿ ಮೂವರ ಬಂಧನ

bengaluru| Geetha| Last Modified ಸೋಮವಾರ, 9 ಆಗಸ್ಟ್ 2021 (17:00 IST)

ಜೋಗರಪಾಳ್ಯ ಗ್ರಾಮದಲ್ಲಿ ಪೊಲೀಸರ ಅನುಮತಿ ಇಲ್ಲದೇ ಹಾಗೂ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಬೇಕಾಬಿಟ್ಟಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಸಾಹಸ ಕಲಾವಿದ ವಿವೇಕ್ ಮೃತಪಟ್ಟಿದ್ದಾರೆ.

ನಟ ಅಜಯ್ ರಾವ್ ಹಾಗೂ ನಟಿ ರಚಿರಾ ರಾಮ್ ನಟಿಸುತ್ತಿರುವ ರಚ್ಚು ಐ ಲವ್ ಯು ತಂಡ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಸಿನಿಮಾದ ನಿರ್ದೇಶಕ ಶಂಕರ್ ರಾಜ್, ಸಾಹಸ ವಿನೋದ್, ನಿರ್ಮಾಪಕ ಗುರುದೇಶಪಾಂಡೆ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ದ 304, 308 ಅಡಿಯಲ್ಲಿ ಬಿಡದಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :