ಕೇರಳ ರಾಜ್ಯದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್ ವಿದ್ಯಾರ್ಥಿಗಳ ತರಬೇತಿ ವಿಮಾನ ಪಲ್ಟಿ ಆಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ಟೆಕ್ನಾಲಜಿಯ CESNA 172R ಹೆಸರಿನ ತರಬೇತಿ ವಿಮಾನ ಟೇಕಾಫ್ ಆಗುವ ಸಮಯದಲ್ಲಿ ಪತನಗೊಂಡಿದೆ. ಅದೃಷ್ಟವಶಾತ್, ವಿಮಾನದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ಬೆಳಗ್ಗೆ 11:30ರ ಸುಮಾರಿಗೆ ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ಟೆಕ್ನಾಲಜಿಯು ತರಬೇತಿ ವಿಮಾನ