ಗ್ರೀಸ್ನಲ್ಲಿ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 26 ಮಂದಿ ಮೃತಪಟ್ಟಿದ್ದು, 85ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಪೈಕಿ 25 ಜನ ಸ್ಥಿತಿ ಚಿಂತಾಜನಕವಾಗಿದೆ ಎಂದು ಗ್ರೀಸ್ ಪೊಲೀಸರು ಮಾಹಿತಿ ನೀಡಿದ್ದಾರೆ. ಅಥೆನ್ಸ್ನ ಉತ್ತರಕ್ಕೆ ಇರುವ ಟೆಂಪಿ ನಗರದ ಹೊರ ವಲಯದಲ್ಲಿ ಅವಘಡ ಸಂಭವಿಸಿದೆ. ಟೆಂಪಿ ನಗರ ಅಥೆನ್ಸ್ನಿಂದ 235 ಮೈಲುಗಳ ದೂರವಿದೆ. ಅಥೆನ್ಸ್ನಿಂದ ಥೆಸಲೋನಿಕಿ ನಗರಕ್ಕೆ